ಮುಖಪುಟ
ನಮ್ಮನ್ನು ಸಂಪರ್ಕಿಸಿ
ಕನ್ನಡ
KJV
தமிழ்
తెలుగు
हिन्दी
ಯೆಹೋಶುವ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
೧ ಸಮುವೇಲನು
೨ ಸಮುವೇಲನು
೧ ಅರಸುಗಳು
೨ ಅರಸುಗಳು
೧ ಪೂರ್ವಕಾಲವೃತ್ತಾಂತ
೨ ಪೂರ್ವಕಾಲವೃತ್ತಾಂತ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗಳು
ರೋಮಾಪುರದವರಿಗೆ
೧ ಕೊರಿಂಥದವರಿಗೆ
೨ ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
೧ ಥೆಸಲೊನೀಕದವರಿಗೆ
೨ ಥೆಸಲೊನೀಕದವರಿಗೆ
೧ ತಿಮೊಥೆಯನಿಗೆ
೨ ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
೧ ಪೇತ್ರನು
೨ ಪೇತ್ರನು
೧ ಯೋಹಾನನು
೨ ಯೋಹಾನನು
೩ ಯೋಹಾನನು
ಯೂದನು
ಪ್ರಕಟನೆ
4
1
2
3
4
5
6
7
8
9
10
11
12
13
14
15
16
17
18
19
20
21
22
23
24
1
ಜನರೆಲ್ಲರು ಯೊರ್ದನನ್ನು ದಾಟಿ ಮುಗಿಸಿದಾಗ ಕರ್ತನು ಯೆಹೋಶುವ ನೊಂದಿಗೆ ಮಾತನಾಡಿ--
2
ನೀನು ಜನರಲ್ಲಿ ಪ್ರತಿ ಗೋತ್ರಕ್ಕೆ ಒಬ್ಬೊಬ್ಬನಾಗಿ ಹನ್ನೆರಡು ಮಂದಿಯನ್ನು ತೆಗೆದು ಕೊಂಡು
3
ಯೊರ್ದನಿನ ಮಧ್ಯದಲ್ಲಿ ಯಾಜಕರ ಕಾಲುಗಳು ಸ್ಥಿರವಾಗಿ ನಿಂತ ಸ್ಥಳದಿಂದ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು ಅವುಗಳನ್ನು ನಿಮ್ಮ ಸಂಗಡ ಆಚೇದಡಕ್ಕೆ ತಂದು ನೀವು ಈ ರಾತ್ರಿ ಇಳುಕೊಳ್ಳುವ ಸ್ಥಳದಲ್ಲಿ ಅವುಗಳನ್ನು ಹಾಕಿರಿ ಎಂದು ಅವರಿಗೆ ಆಜ್ಞಾ ಪಿಸು ಅಂದನು.
4
ಆಗ ಯೆಹೋಶುವನು ಇಸ್ರಾ ಯೇಲ್ ಮಕ್ಕಳಲ್ಲಿ ಒಂದೊಂದು ಗೋತ್ರಕ್ಕೆ ಒಬ್ಬೊಬ್ಬನ ಪ್ರಕಾರ ತಾನು ಏರ್ಪಡಿಸಿದ ಹನ್ನೆರಡು ಮಂದಿಯನ್ನು ಕರೆದನು.
5
ಯೆಹೋಶುವನು ಅವರಿಗೆ--ನೀವು ಯೊರ್ದನಿನ ಮಧ್ಯದಲ್ಲಿ ನಿಮ್ಮ ದೇವರಾದ ಕರ್ತನ ಮಂಜೂಷದ ಮುಂದೆ ಇಸ್ರಾಯೇಲ್ ಮಕ್ಕಳ ಗೋತ್ರ ಗಳ ಲೆಕ್ಕಕ್ಕೆ ಸರಿಯಾಗಿ ಒಬ್ಬೊಬ್ಬನು ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿರಿ.
6
ಇದು ನಿಮ್ಮ ಮಧ್ಯದಲ್ಲಿ ಗುರುತಾಗಿರಬೇಕು; ಬರುವ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು ಈ ಕಲ್ಲುಗಳೇನೆಂದು ಕೇಳಿದಾಗ
7
ನೀವು ಅವರಿಗೆ--ಯೊರ್ದನಿನ ನೀರು ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ವಿಭಾಗಿಸಲ್ಪಟ್ಟಿತು; ಅದು ಯೊರ್ದನನ್ನು ದಾಟುವಾಗ ಯೊರ್ದನಿನ ನೀರು ಭೇದಿಸಲ್ಪಟ್ಟಿತ್ತು. ಈ ಕಲ್ಲುಗಳು ಇಸ್ರಾಯೇಲ್ ಮಕ್ಕಳಿಗೆ ಎಂದೆಂದಿಗೂ ಜ್ಞಾಪಕಾರ್ಥ ವಾದ ಗುರುತಾಗಿರುವವು ಎಂದು ಉತ್ತರ ಕೊಡಬೇಕು ಅಂದನು.
8
ಆಗ ಇಸ್ರಾಯೇಲ್ ಮಕ್ಕಳು ಯೆಹೋಶುವನು ಆಜ್ಞಾಪಿಸಿದ ಹಾಗೆ ಮಾಡಿದರು; ಕರ್ತನು ಯೆಹೋಶುವನಿಗೆ ಹೇಳಿದ ಪ್ರಕಾರ ಇಸ್ರಾ ಯೇಲ್ ಮಕ್ಕಳ ಗೋತ್ರಗಳ ಲೆಕ್ಕಕ್ಕೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ಯೊರ್ದನಿನ ಮಧ್ಯದಿಂದ ತೆಗೆದುಕೊಂಡು ಅವುಗಳನ್ನು ತಮ್ಮ ಸಂಗಡ ತಂದು ತಾವು ಇಳಿದುಕೊಂಡ ಸ್ಥಳದಲ್ಲಿ ಅವುಗಳನ್ನು ನಿಲ್ಲಿಸಿ ದರು.
9
ಯೆಹೋಶುವನು ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರ ಕಾಲುಗಳು ನಿಂತಿದ್ದ ಸ್ಥಳದಲ್ಲಿ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. ಅವು ಈ ದಿನದ ವರೆಗೂ ಅಲ್ಲಿಯೇ ಇವೆ.
10
ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿದ ಪ್ರಕಾರ ಜನರಿಗೆ ಹೇಳಲು ಕರ್ತನು ಯೆಹೋಶುವನಿಗೆ ಆಜ್ಞಾಪಿಸಿದ್ದೆಲ್ಲಾ ತೀರುವ ವರೆಗೂ ಮಂಜೂಷವನ್ನು ಹೊರುವ ಯಾಜಕರು ಯೊರ್ದನಿನ ನಡುವೆ ನಿಂತರು; ಜನರು ತ್ವರೆಯಾಗಿ ದಾಟಿಹೋದರು.
11
ಜನರೆಲ್ಲರೂ ದಾಟಿದ ಮೇಲೆ ಕರ್ತನ ಮಂಜೂಷವೂ ಯಾಜಕರೂ ಜನರ ಎದುರಿನಲ್ಲಿ ದಾಟಿದರು.
12
ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರವೂ ಮೋಶೆಯು ತಮಗೆ ಹೇಳಿದ ಹಾಗೆಯೇ ಯುದ್ಧಸನ್ನದ್ಧರಾಗಿ ಇಸ್ರಾಯೇಲ್ ಮಕ್ಕಳ ಮುಂದೆ ಹಾದುಹೋದರು.
13
ಹೆಚ್ಚು ಕಡಿಮೆ ನಾಲ್ವತ್ತು ಸಾವಿರ ಜನರು ಯುದ್ಧಕ್ಕೆ ಸಿದ್ಧರಾಗಿ ಕರ್ತನ ಎದುರಿನಲ್ಲಿ ಯುದ್ಧ ಮಾಡುವದಕ್ಕೆ ಯೆರಿಕೋವಿನ ಬೈಲುಗಳಿಗೆ ಹಾದು ಹೋದರು.
14
ಆ ದಿನದಲ್ಲಿ ಕರ್ತನು ಯೆಹೋಶುವ ನನ್ನು ಇಸ್ರಾಯೇಲ್ಯರೆಲ್ಲರ ಮುಂದೆ ಘನಪಡಿಸಿದನು. ಅವರು ಮೋಶೆಗೆ ಭಯಪಟ್ಟ ಹಾಗೆಯೇ ಅವನು ಬದುಕಿದ ದಿನಗಳಲ್ಲೆಲ್ಲಾ ಅವನಿಗೂ ಭಯಪಟ್ಟರು.
15
ಕರ್ತನು ಯೆಹೋಶುವನ ಸಂಗಡ ಮಾತ ನಾಡಿ --
16
ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರಿಗೆ ಯೊರ್ದನಿನಿಂದ ಮೇಲಕ್ಕೆ ಬರುವದಕ್ಕೆ ಆಜ್ಞಾಪಿಸು ಎಂದು ಹೇಳಿದನು.
17
ಆಗ ಯೆಹೋಶುವನು ಯಾಜಕರಿಗೆ ಆಜ್ಞಾಪಿಸಿ--ಯೊರ್ದ ನಿನಿಂದ ಮೇಲಕ್ಕೆ ಬನ್ನಿರಿ ಎಂದು ಹೇಳಿದನು.
18
ಆಗ ಆದದ್ದೇನಂದರೆ, ಕರ್ತನ ಒಡಂಬಡಿಕೆಯ ಮಂಜೂಷ ವನ್ನು ಹೊರುವ ಯಾಜಕರು ಯೊರ್ದನಿನ ಮಧ್ಯ ದಲ್ಲಿಂದ ತಮ್ಮ ಪಾದಗಳನ್ನು ಒಣಗಿದ ಭೂಮಿಗೆ ಇಟ್ಟಾಗ ಯೊರ್ದನಿನ ನೀರು ತಿರಿಗಿ ಮೊದಲಿನ ಹಾಗೆಯೇ ದಡಗಳ ಮೇಲೆಲ್ಲಾ ಹರಿಯಿತು.
19
ಜನರು ಮೊದಲನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಯೊರ್ದನನ್ನು ದಾಟಿ ಬಂದು ಯೆರಿಕೋವಿನ ಮೂಡಣ ಮೇರೆಯಾದ ಗಿಲ್ಗಾಲಿನಲ್ಲಿ ಇಳಿದು ಕೊಂಡರು.
20
ಅಲ್ಲಿ ಅವರು ಯೊರ್ದನಿನಿಂದ ತೆಗೆದು ಕೊಂಡ ಹನ್ನೆರಡು ಕಲ್ಲುಗಳನ್ನು ಯೆಹೋಶುವನು ಗಿಲ್ಗಾಲಿನಲ್ಲಿ ನಿಲ್ಲಿಸಿದನು.
21
ಅವನು ಇಸ್ರಾಯೇಲ್ ಮಕ್ಕಳಿಗೆ--ನಿಮ್ಮ ಮಕ್ಕಳು ಈ ಕಲ್ಲುಗಳು ಏನೆಂದು ಬರುವ ಕಾಲದಲ್ಲಿ ತಮ್ಮ ತಂದೆಗಳನ್ನು ಕೇಳಿದಾಗ ನೀವು ಅವರಿಗೆ
22
ತಿಳಿಸಬೇಕಾದದ್ದೇನಂದರೆ--ಇಸ್ರಾ ಯೇಲ್ಯರು ಒಣಗಿದ ಭೂಮಿಯಲ್ಲಿ ಈ ಯೊರ್ದನನ್ನು ದಾಟಿ ಬಂದರು.
23
ಭೂಮಿಯ ಜನರೆಲ್ಲಾ ಕರ್ತನ ಹಸ್ತವು ಬಲವುಳ್ಳದ್ದೆಂದು ತಿಳಿಯುವ ಹಾಗೆಯೂ ನೀವು ನಿರಂತರವೂ ನಿಮ್ಮ ಕರ್ತನಾದ ದೇವರಿಗೆ ಭಯಪಡುವ ಹಾಗೆಯೂ
24
ನಿಮ್ಮ ದೇವರಾದ ಕರ್ತನು ಕೆಂಪು ಸಮುದ್ರವನ್ನು ನಾವು ದಾಟುವ ಪರಿಯಂತರ ನಮ್ಮ ಮುಂದೆ ಒಣಗಿ ಹೋಗಮಾಡಿದ ಹಾಗೆ ನೀವು ದಾಟಿ ಬರುವ ಪರಿಯಂತರ ದೇವರಾದ ಕರ್ತನು ಯೊರ್ದನಿನ ನೀರನ್ನು ಭಾಗ ಮಾಡಿದನು.
‹
›