ಮುಖಪುಟ
ನಮ್ಮನ್ನು ಸಂಪರ್ಕಿಸಿ
ಕನ್ನಡ
KJV
தமிழ்
తెలుగు
हिन्दी
ಯೆಹೋಶುವ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
೧ ಸಮುವೇಲನು
೨ ಸಮುವೇಲನು
೧ ಅರಸುಗಳು
೨ ಅರಸುಗಳು
೧ ಪೂರ್ವಕಾಲವೃತ್ತಾಂತ
೨ ಪೂರ್ವಕಾಲವೃತ್ತಾಂತ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗಳು
ರೋಮಾಪುರದವರಿಗೆ
೧ ಕೊರಿಂಥದವರಿಗೆ
೨ ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
೧ ಥೆಸಲೊನೀಕದವರಿಗೆ
೨ ಥೆಸಲೊನೀಕದವರಿಗೆ
೧ ತಿಮೊಥೆಯನಿಗೆ
೨ ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
೧ ಪೇತ್ರನು
೨ ಪೇತ್ರನು
೧ ಯೋಹಾನನು
೨ ಯೋಹಾನನು
೩ ಯೋಹಾನನು
ಯೂದನು
ಪ್ರಕಟನೆ
21
1
2
3
4
5
6
7
8
9
10
11
12
13
14
15
16
17
18
19
20
21
22
23
24
1
ಲೇವಿಯರ ಪಿತೃಗಳ ಹಿರಿಯರು ಕಾನಾನ್ ದೇಶದ ಶೀಲೋವಿನಲ್ಲಿರುವ ಯಾಜಕ ನಾದ ಎಲಿಯಾಜರನ ಬಳಿಗೂ ನೂನನ ಮಗನಾದ ಯೆಹೋಶುವನ ಬಳಿಗೂ ಇಸ್ರಾಯೇಲ್ ಮಕ್ಕಳ ಗೋತ್ರಗಳ ಪಿತೃಗಳಲ್ಲಿರುವ ಹಿರಿಯರ ಬಳಿಗೂ ಬಂದು ಅವರ ಸಂಗಡ ಮಾತನಾಡಿ--
2
ನಾವು ವಾಸವಾಗಿರುವ ಪಟ್ಟಣಗಳನ್ನು ನಮ್ಮ ಪಶುಗಳಿಗೋಸ್ಕರ ಅವುಗಳ ಉಪನಗರಗಳೊಂದಿಗೆ ನಮಗೆ ಕೊಡಬೇಕೆಂದು ಕರ್ತನು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿ ದ್ದಾನೆ ಅಂದರು.
3
ಹಾಗೆಯೇ ಇಸ್ರಾಯೇಲ್ ಮಕ್ಕಳು ತಮ್ಮ ಬಾಧ್ಯತೆಯಲ್ಲಿ ಲೇವಿಯರಿಗೆ ಕರ್ತನ ಅಜ್ಞೆಯ ಪ್ರಕಾರ ಪಟ್ಟಣಗಳನ್ನೂ ಅವುಗಳ ಉಪನಗರಗಳನ್ನೂ ಕೊಟ್ಟರು. ಅವು ಯಾವವೆಂದರೆ--
4
ಕೆಹಾತ್ಯರ ಗೋತ್ರಗಳಿಗೆ ಚೀಟು ಹಾಕಿದಾಗ ಲೇವಿಯರಲ್ಲಿ ಯಾಜಕನಾದ ಆರೋನನ ಮಕ್ಕಳಿಗೆ ಯೂದನ ಗೋತ್ರದಲ್ಲಿಯೂ ಸಿಮೆಯೋನನ ಗೋತ್ರ ದಲ್ಲಿಯೂ ಬೆನ್ಯಾವಿಾನನ ಗೋತ್ರದಲ್ಲಿಯೂ ಹದಿ ಮೂರು ಪಟ್ಟಣಗಳು ದೊರಕಿದವು.
5
ಕೆಹಾತನ ಉಳಿದ ಮಕ್ಕಳಿಗೆ ಎಫ್ರಾಯಾಮನ ಗೊತ್ರದಲ್ಲಿಯೂ ದಾನನ ಗೋತ್ರದಲ್ಲಿಯೂ ಮನಸ್ಸೆಯ ಅರ್ಧಗೋತ್ರದ ಲ್ಲಿಯೂ ಹತ್ತು ಪಟ್ಟಣಗಳೂ ದೊರಕಿದವು.
6
ಗೆರ್ಷೋನ್ಯನ ಮಕ್ಕಳಿಗೆ ಚೀಟಿ ಹಾಕಿದಾಗ ಇಸ್ಸಾಕಾರನ ಗೋತ್ರಗಳ ಕುಟುಂಬಗಳಲ್ಲಿಯೂ ಆಶೇರನ ಗೋತ್ರದಲ್ಲಿಯೂ ನಫ್ತಾಲಿಯ ಗೋತ್ರ ದಲ್ಲಿಯೂ ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ದೊರ ಕಿದವು.
7
ಇದಲ್ಲದೆ ಮೆರಾರಿಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ರೂಬೇನನ ಗೋತ್ರದಲ್ಲಿಯೂ ಗಾದನ ಗೋತ್ರದಲ್ಲಿಯೂ ಜೆಬುಲೂನನ ಗೋತ್ರ ದಲ್ಲಿಯೂ ಹನ್ನೆರಡು ಪಟ್ಟಣಗಳು ದೊರಕಿದವು.
8
ಈ ಪಟ್ಟಣಗಳನ್ನು ಅವುಗಳ ಉಪನಗರಗಳನ್ನು ಇಸ್ರಾಯೇಲ್ ಮಕ್ಕಳು ಕರ್ತನು ಮೋಶೆಯ ಮುಖಾಂತರ ಆಜ್ಞಾಪಿಸಿದ ಪ್ರಕಾರ ಲೇವಿಯರಿಗೆ ಚೀಟುಹಾಕಿ ಕೊಟ್ಟರು.
9
ಆದರೆ ಲೇವಿಯ ಮಕ್ಕಳಲ್ಲಿ ಮೊದಲನೇ ಚೀಟು ಬಿದ್ದ ಕೆಹಾತ್ಯರ ಗೋತ್ರಗಳಲ್ಲಿ ಇರುವ ಆರೋನನ ಮಕ್ಕಳಿಗೆ ಯೂದನ ಮಕ್ಕಳ ಗೋತ್ರದಲ್ಲಿಯೂ ಸಿಮೆಯೋನನ ಮಕ್ಕಳ ಗೋತ್ರದಲ್ಲಿಯೂ ಕೊಡಲ್ಪಟ್ಟ ಪಟ್ಟಣಗಳ ಹೆಸರುಗಳು
10
ಯಾವವಂದರೆ--ಲೇವಿ ಕುಲದವರೂ ಕೆಹಾತನ ಗೋತ್ರದವರೂ ಆದ ಆರೋನನ ಕುಟುಂಬದವರಿಗೆ ಚೀಟು ಮೊದಲು ಬಿದದ್ದರಿಂದ
11
ಯೂದನ ಬೆಟ್ಟಗಳಲ್ಲಿರುವ ಅನಾಕನ ತಂದೆಯಾದ ಅರ್ಬನ ಹೆಸರಿನ ಪಟ್ಟಣ ಹೆಬ್ರೋ ನನ್ನೂ ಅದರ ಸುತ್ತಲಿರುವ ಉಪನಗರಗಳನ್ನೂ ಅವ ರಿಗೆ ಕೊಟ್ಟರು.
12
ಆದರೆ ಆ ಪಟ್ಟಣದ ಹೊಲಗ ಳನ್ನೂ ಗ್ರಾಮಗಳನ್ನೂ ಯೆಫುನ್ನೆಯ ಮಗನಾದ ಕಾಲೇಬನಿಗೆ ಬಾಧ್ಯತೆಯಾಗಿ ಕೊಟ್ಟರು.
13
ಹೀಗೆಯೇ ಯಾಜಕನಾದ ಆರೋನನ ಮಕ್ಕಳಿಗೆ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಹೆಬ್ರೋನನ್ನೂ ಅದರ ಉಪನಗರಗಳನ್ನೂ ಲಿಬ್ನಾವನ್ನೂ ಅದರ ಉಪ ನಗರಗಳನ್ನೂ
14
ಯತ್ತೀರನ್ನೂ ಅದರ ಉಪನಗರ ಗಳನ್ನೂ ಎಷ್ಟೆಮೋಹವನ್ನೂ ಅದರ ಉಪನಗರಗ ಳನ್ನೂ
15
ಹೋಲೋನನ್ನೂ ಅದರ ಉಪನಗರಗ ಳನ್ನೂ ದೆಬೀರನ್ನೂ ಅದರ ಉಪನಗರಗಳನ್ನೂ
16
ಆಯಿನನ್ನೂ ಅದರ ಉಪನಗರಗಳನ್ನೂ ಯುಟ್ಟಾ ವನ್ನೂ ಅದರ ಉಪನಗರಗಳನ್ನೂ ಬೇತ್‌ಷೆಮೆಷನ್ನೂ ಅದರ ಉಪನಗರಗಳನ್ನೂ; ಹೀಗೆಯೇ ಆ ಎರಡು ಗೋತ್ರಗಳಿಂದ ಈ ಒಂಭತ್ತು ಪಟ್ಟಣಗಳನ್ನು ಕೊಟ್ಟರು.
17
ಇದಲ್ಲದೆ ಬೆನ್ಯಾವಿಾನನ ಗೋತ್ರದಲ್ಲಿ ಗಿಬ್ಯೋ ನನ್ನೂ ಅದರ ಉಪನಗರಗಳನ್ನೂ ಗೆಬವನ್ನೂ ಅದರ ಉಪನಗರಗಳನ್ನೂ
18
ಅನಾತೋತನ್ನೂ ಅದರ ಉಪನಗರಗಳನ್ನೂ ಅಲ್ಮೋನನ್ನೂ ಅದರ ಉಪನಗರ ಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
19
ಯಾಜಕನಾದ ಆರೋನನ ಮಕ್ಕಳ ಪಟ್ಟಣಗಳೆಲ್ಲಾ ಹದಿಮೂರು ಪಟ್ಟಣಗಳೂ ಅವುಗಳ ಉಪನಗರಗಳೂ.
20
ಇದಲ್ಲದೆ ಲೇವಿಯರಾದ ಕೆಹಾತನ ಮಕ್ಕಳ ಕುಟುಂಬದಲ್ಲಿ ಉಳಿದವರಿಗೆ ಎಫ್ರಾಯಾಮನ ಗೋತ್ರದಲ್ಲಿ ಚೀಟಿನಿಂದ ದೊರಕಿದ ಪಟ್ಟಣಗಳು,
21
ಕೊಲೆಮಾಡಿದವನಿಗೆ ಆಶ್ರಯ ಪಟ್ಟಣವಾದ ಎಫ್ರಾಯಾಮನ ಬೆಟ್ಟಗಳಲ್ಲಿರುವ ಶೆಕೇಮನ್ನೂ ಅದರ ಉಪನಗರಗಳನ್ನೂ ಗೆಜೆರನ್ನೂ ಅದರ ಉಪನಗರ ಗಳನ್ನೂ
22
ಕಿಬ್‌ಚೈಮನ್ನೂ ಅದರ ಉಪನಗರಗಳನ್ನೂ; ಬೇತ್‌ಹೋರೋನನ್ನೂ ಆದರ ಉಪನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
23
ಇದಲ್ಲದೆ ದಾನನ ಗೋತ್ರದಲ್ಲಿ ಎಲ್ತೆಕೇಯನ್ನೂ ಅದರ ಉಪ ನಗರಗಳನ್ನೂ ಗಿಬ್ಬೆತೋನನ್ನೂ ಅದರ ಉಪನಗರ ಗಳನ್ನೂ;
24
ಅಯ್ಯಾಲೋನನ್ನೂ ಅದರ ಉಪನಗರ ಗಳನ್ನೂ ಗತ್‌ರಿಮ್ಮೋನನ್ನೂ ಅದರ ಉಪನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
25
ಮನಸ್ಸೆಯ ಅರ್ಧಗೋತ್ರದಲ್ಲಿ ತಾನಾಕನ್ನೂ ಅದರ ಉಪನಗರ ಗಳನ್ನೂ; ಗತ್‌ರಿಮ್ಮೋನನ್ನೂ ಅದರ ಉಪನಗರ ಗಳನ್ನೂ ಹೀಗೆ ಎರಡು ಪಟ್ಟಣಗಳನ್ನು ಕೊಟ್ಟರು.
26
ಹಾಗೆಯೇ ಉಳಿದಂಥ ಕೆಹಾತನ ಮಕ್ಕಳ ಕುಟುಂಬಗಳಿಗೆ ದೊರೆತ ಪಟ್ಟಣಗಳೆಲ್ಲಾ ಹತ್ತು ಪಟ್ಟಣಗಳೂ ಅವುಗಳ ಉಪನಗರಗಳೂ.
27
ಲೇವಿಯರ ಕುಟುಂಬಗಳಲ್ಲಿರುವ ಗೆರ್ಷೋನಿನ ಮಕ್ಕಳಿಗೆ ಮನಸ್ಸೆಯ ಅರ್ಧ ಗೋತ್ರದಲ್ಲಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಬಾಷಾನಿ ನಲ್ಲಿರುವ ಗೋಲಾನನ್ನೂ ಅದರ ಉಪನಗರಗಳನ್ನೂ ಬೆಯೆಷ್ಟೆರಾವನ್ನೂ ಅದರ ಉಪನಗರಗಳನ್ನೂ; ಹೀಗೆ ಎರಡು ಪಟ್ಟಣಗಳನ್ನು ಕೊಟ್ಟರು.
28
ಇದಲ್ಲದೆ ಇಸ್ಸಾಕಾರನ ಗೋತ್ರದಲ್ಲಿ ಕಿಷ್ಯೋನನ್ನೂ ಅದರ ಉಪ ನಗರಗಳನ್ನೂ ದಾಬೆರತನ್ನೂ ಅದರ ಉಪನಗರ ಗಳನ್ನೂ
29
ಯರ್ಮೂತನ್ನೂ ಅದರ ಉಪನಗರ ಗಳನ್ನೂ ಏಂಗನ್ನೀಮನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
30
ಆಶೇರನ ಗೋತ್ರದಲ್ಲಿ ಮಿಷಾಲನ್ನೂ ಅದರ ಉಪನಗರ ಗಳನ್ನೂ ಅಬ್ದೋನನ್ನೂ ಅದರ ಉಪನಗರಗಳನ್ನೂ
31
ಹೆಲ್ಕಾತನ್ನೂ ಅದರ ಉಪನಗರಗಳನ್ನೂ ರೆಹೋ ಬನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
32
ನಫ್ತಾಲಿಯ ಗೋತ್ರ ದಲ್ಲಿ ಕೊಲೆಮಾಡಿದವನಿಗೆ ಆಶ್ರಯ ಪಟ್ಟಣವಾದ ಗಲಿಲಾಯದಲ್ಲಿರುವ ಕೆದೆಷನ್ನೂ ಅದರ ಉಪನಗರ ಗಳನ್ನೂ ಹಮ್ಮೋತ್‌ದೋರನ್ನೂ ಅದರ ಉಪನಗರ ಗಳನ್ನೂ ಕರ್ತಾನನ್ನೂ ಅದರ ಉಪನಗರಗಳನ್ನೂ; ಹೀಗೆ ಮೂರು ಪಟ್ಟಣಗಳನ್ನು ಕೊಟ್ಟರು.
33
ಗೆರ್ಷೋನ್ಯರಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಪಟ್ಟಣಗಳೆಲ್ಲಾ ಹದಿಮೂರು ಪಟ್ಟಣಗಳೂ ಅವುಗಳ ಉಪನಗರಗಳೂ.
34
ಉಳಿದ ಲೇವಿಯರಾದ ಮೆರಾರೀಯ ಮಕ್ಕಳ ಕುಟುಂಬಗಳಿಗೆ ಜೆಬುಲೂನನ ಗೋತ್ರದಲ್ಲಿ ಯೊಕ್ನೆ ಯಾಮನ್ನೂ ಆದರ ಉಪನಗರಗಳನ್ನೂ ಕರ್ತಾನನ್ನೂ ಅದರ ಉಪನಗರಗಳನ್ನೂ
35
ದಿಮ್ನಾವನ್ನೂ ಅದರ ಉಪನಗರಗಳನ್ನೂ ನಹಲಾಲನ್ನೂ ಅದರ ಉಪ ನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
36
ಇದಲ್ಲದೆ ರೂಬೇನನ ಗೋತ್ರದಲ್ಲಿ ಬೆಚೆರನ್ನೂ ಅದರ ಉಪನಗರಗಳನ್ನೂ ಯಹಚಾ ವನ್ನೂ ಅದರ ಉಪನಗರಗಳನ್ನೂ
37
ಕೆದೇಮೋತನ್ನೂ ಅದರ ಉಪನಗರಗಳನ್ನೂ ಮೆಫಾಗತನ್ನೂ ಅದರ ಉಪ ನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
38
ಗಾದನ ಗೋತ್ರದಲ್ಲಿ ಕೊಲೆ ಮಾಡಿ ದವನಿಗೆ ಆಶ್ರಯ ಪಟ್ಟಣವಾದ ಗಿಲ್ಯಾದಿನಲ್ಲಿರುವ ರಾಮೋತನ್ನೂ ಅದರ ಉಪನಗರಗಳನ್ನೂ ಮಹನ ಯಿಮನ್ನೂ ಅದರ ಉಪನಗರಗಳನ್ನೂ
39
ಹೆಷ್ಬೋ ನನ್ನೂ ಅದರ ಉಪನಗರಗಳನ್ನೂ ಯಗ್ಜೇರನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣ ಗಳನ್ನು ಕೊಟ್ಟರು.
40
ಹೀಗೆಯೇ ಲೇವಿಯರ ಕುಟುಂಬಗಳಲ್ಲಿ ಉಳಿದಂಥ ಮೆರಾರೀಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಚೀಟಿನಿಂದ ದೊರೆತ ಪಟ್ಟಣಗಳೆಲ್ಲಾ ಹನ್ನೆರಡು ಪಟ್ಟಣಗಳೂ ಅವುಗಳ ಉಪನಗರಗಳೂ.
41
ಇಸ್ರಾಯೇಲ್ ಮಕ್ಕಳ ಸ್ವಾಸ್ತ್ಯದ ಮಧ್ಯದಲ್ಲಿ ಇರುವ ಲೇವಿಯರ ಎಲ್ಲಾ ಪಟ್ಟಣಗಳೂ ಅವುಗಳ ಉಪನಗರಗಳೂ ನಾಲ್ವತ್ತೆಂಟು ಪಟ್ಟಣಗಳು.
42
ಈ ಪಟ್ಟಣಗಳಲ್ಲಿ ಪ್ರತಿಯೊಂದಕ್ಕೂ ಅದರದರ ಸುತ್ತಲೂ ಉಪನಗರಗಳು ಇದ್ದವು; ಪಟ್ಟಣಗಳಿಗೆಲ್ಲಾ ಹೀಗೆಯೇ ಇದ್ದವು.
43
ಕರ್ತನು ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನೆಲ್ಲಾ ಇಸ್ರಾಯೇಲಿಗೆ ಕೊಟ್ಟನು; ಅವರು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸವಾಗಿದ್ದರು.
44
ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ಪ್ರಕಾರವೆಲ್ಲಾ ಅವರ ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು; ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ; ಅವರ ಶತ್ರುಗಳನ್ನೆಲ್ಲಾ ಕರ್ತನು ಅವರ ಕೈಗಳಿಗೆ ಒಪ್ಪಿಸಿದನು.
45
ಕರ್ತನು ಇಸ್ರಾಯೇಲ್ ಮನೆಗೆ ಹೇಳಿದ ಒಳ್ಳೇ ವಿಷಯಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ; ಎಲ್ಲಾ ನೆರವೇರಿದವು.
‹
›