ಮುಖಪುಟ
ನಮ್ಮನ್ನು ಸಂಪರ್ಕಿಸಿ
ಕನ್ನಡ
KJV
தமிழ்
తెలుగు
हिन्दी
ಜೆಕರ್ಯ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
೧ ಸಮುವೇಲನು
೨ ಸಮುವೇಲನು
೧ ಅರಸುಗಳು
೨ ಅರಸುಗಳು
೧ ಪೂರ್ವಕಾಲವೃತ್ತಾಂತ
೨ ಪೂರ್ವಕಾಲವೃತ್ತಾಂತ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗಳು
ರೋಮಾಪುರದವರಿಗೆ
೧ ಕೊರಿಂಥದವರಿಗೆ
೨ ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
೧ ಥೆಸಲೊನೀಕದವರಿಗೆ
೨ ಥೆಸಲೊನೀಕದವರಿಗೆ
೧ ತಿಮೊಥೆಯನಿಗೆ
೨ ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
೧ ಪೇತ್ರನು
೨ ಪೇತ್ರನು
೧ ಯೋಹಾನನು
೨ ಯೋಹಾನನು
೩ ಯೋಹಾನನು
ಯೂದನು
ಪ್ರಕಟನೆ
14
1
2
3
4
5
6
7
8
9
10
11
12
13
14
1
ಇಗೋ, ಕರ್ತನ ದಿನವು ಬರುತ್ತದೆ.
2
ಆಗ ನಿನ್ನ ಕೊಳ್ಳೆಯು ನಿನ್ನ ಮಧ್ಯದಲ್ಲಿ ವಿಭಾಗಿಸ ಲ್ಪಡುವದು; ನಾನು ಜನಾಂಗಗಳನ್ನೆಲ್ಲಾ ಯೆರೂಸ ಲೇಮಿಗೆ ವಿರೋಧವಾಗಿ ಯುದ್ಧಕ್ಕೆ ಕೂಡಿಸುವೆನು; ಪಟ್ಟಣವು ಹಿಡಿಯಲ್ಪಡುವದು; ಮನೆಗಳು ಸುಲು ಕೊಳ್ಳಲ್ಪಡುವವು, ಹೆಂಗಸರು ಕೆಡಿಸಲ್ಪಡುವರು, ಪಟ್ಟಣದ ಅರವಾಸಿ ಜನರು ಸೆರೆಗೆ ಹೋಗುವರು; ಆದರೆ ಉಳಿದ ಜನರೆಲ್ಲರು ಪಟ್ಟಣದೊಳಗಿಂದ ತೆಗೆದುಬಿಡಲ್ಪಡುವದಿಲ್ಲ.
3
ಆಗ ಕರ್ತನು ಹೊರಟು ಯುದ್ಧದ ದಿನದಲ್ಲಿ ಕಾದಾಟಮಾಡಿದ ಪ್ರಕಾರವೇ ಆ ಜನಾಂಗಗಳ ಸಂಗಡ ಆತನು ಕಾದಾಟ ಮಾಡುವನು.
4
ಆ ದಿನದಲ್ಲಿ ಆತನ ಪಾದಗಳು ಯೆರೂಸಲೇಮಿನ ಮುಂದೆ ಪೂರ್ವ ದಿಕ್ಕಿನಲ್ಲಿರುವ ಎಣ್ಣೇ ಮರದ ಗುಡ್ಡದ ಮೇಲೆ ನಿಲ್ಲುವವು; ಎಣ್ಣೇ ಮರದ ಗುಡ್ಡವು ಅದರ ನಡುವೆಯಿಂದ ಪೂರ್ವಕ್ಕೂ ಪಶ್ಚಿಮಕ್ಕೂ ಸೀಳಿ ಬಹುದೊಡ್ಡ ತಗ್ಗಾಗುವದು; ಅರ್ಧ ಗುಡ್ಡವು ಉತ್ತರಕ್ಕೂ ಅರ್ಧ ದಕ್ಷಿಣಕ್ಕೂ ಸರಿದು ಕೊಳ್ಳುವದು.
5
ನೀವು ಬೆಟ್ಟಗಳ ತಗ್ಗಿಗೆ ಓಡಿಹೋಗು ವಿರಿ; ಬೆಟ್ಟಗಳ ತಗ್ಗು ಆಚೆಲಿಗೆ ಮುಟ್ಟುವದು. ಹೌದು, ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿ ನೀವು ಭೂಕಂಪಕ್ಕೆ ಓಡಿಹೋದ ಹಾಗೆ ಓಡಿಹೋಗು ವಿರಿ; ನನ್ನ ದೇವರಾದ ಕರ್ತನು ತನ್ನ ಪರಿಶುದ್ಧರೆ ಲ್ಲರ ಸಂಗಡ ಬರುವನು.
6
ಆ ದಿನದಲ್ಲಿ ಆಗುವದೇ ನಂದರೆ--ಬೆಳಕು ಇಲ್ಲವೆ ಕತ್ತಲೆಯು ಸ್ಪಷ್ಟವಾಗಿರದು.
7
ಆದರೆ ಕರ್ತನಿಗೆ ತಿಳಿದಿರುವ ಒಂದು ದಿನ ಇರುವದು, ಅದು ಹಗಲೂ ಅಲ್ಲ, ರಾತ್ರಿಯೂ ಅಲ್ಲ; ಆದರೆ ಸಾಯಂಕಾಲದ ಸಮಯದಲ್ಲಿ ಬೆಳಕು ಇರುವದು.
8
ಆ ದಿನದಲ್ಲಿ ಆಗುವದೇನಂದರೆ, ಯೆರೂಸಲೇಮಿ ನೊಳಗಿದ್ದ ಜೀವಜಲಗಳು ಹೊರಡುವವು; ಅವುಗ ಳಲ್ಲಿ ಅರ್ಧ ಪೂರ್ವ ಸಮುದ್ರಕ್ಕೆ ಅರ್ಧ ಪಶ್ಚಿಮ ಸಮುದ್ರಕ್ಕೆ ಹೋಗುವವು; ಅದು ಬೇಸಿಗೆ ಕಾಲ ದಲ್ಲಿಯೂ ಚಳಿಗಾಲದಲ್ಲಿಯೂ ಇರುವದು.
9
ಕರ್ತನು ಭೂಮಿಗೆಲ್ಲಾ ಅರಸನಾಗಿರುವನು; ಆ ದಿನದಲ್ಲಿ ಕರ್ತನು ಒಬ್ಬನೇ ಇರುವನು; ಆತನ ಹೆಸರು ಒಂದೇ.
10
ದೇಶವೆಲ್ಲಾ ಗೆಬ ಮೊದಲುಗೊಂಡು ಯೆರೂಸ ಲೇಮಿನ ದಕ್ಷಿಣದಲ್ಲಿರುವ ರಿಮ್ಮೋನಿನ ವರೆಗೂ ಬೈಲಿನ ಹಾಗೆ ಮಾರ್ಪಡುವದು; ಅದು ಎತ್ತಲ್ಪಟ್ಟು ತನ್ನ ಸ್ಥಳ ದಲ್ಲಿ ಬೆನ್ಯಾವಿಾನನ ಬಾಗಲು ಮೊದಲುಗೊಂಡು ಮೊದಲನೇ ಬಾಗಲಿನ ಸ್ಥಳದ ವರೆಗೂ ಮೂಲೆ ಬಾಗಲಿನ ವರೆಗೂ ಹನನೇಲನ ಗೋಪುರ ಮೊದಲು ಗೊಂಡು ಅರಸನ ದ್ರಾಕ್ಷೇ ಅಲೆಗಳ ವರೆಗೂ ನಿವಾಸ ವಾಗುವದು.
11
ಅದರಲ್ಲಿ ಜನರು ವಾಸವಾಗಿರುವರು; ಅಲ್ಲಿ ಇನ್ನು ಮೇಲೆ ಸಂಪೂರ್ಣವಾದ ನಾಶವಿರದು; ಆದರೆ ಯೆರೂಸಲೇಮು ಭದ್ರವಾಗಿ ವಾಸಿಸುವದು.
12
ಯೆರೂಸಲೇಮಿಗೆ ವಿರೋಧವಾಗಿ ದಂಡುಕಟ್ಟಿ ಕೊಂಡಿರುವ ಎಲ್ಲಾ ಜನಗಳನ್ನು ಕರ್ತನು ವ್ಯಾಧಿ ಯಿಂದ ಬಾಧಿಸುವನು; ಹೀಗೆಯೇ ಅವರು ಕಾಲಿನ ಮೇಲೆ ನಿಲ್ಲುವಾಗ ಅವರ ಶರೀರವು ಕ್ಷಯಿಸಿಹೋಗು ವದು; ಅವರ ಕಣ್ಣುಗಳು ಗುಣಿಗಳಲ್ಲಿ ಇಂಗಿಹೋಗು ವವು; ಅವರ ನಾಲಿಗೆ ಅವರ ಬಾಯಲ್ಲಿ ಕ್ಷಯಿಸಿ ಹೋಗುವದು.
13
ಆ ದಿನದಲ್ಲಿ ಆಗುವದೇನಂದರೆ --ಕರ್ತನಿಂದಾದ ದೊಡ್ಡ ಕೋಲಾಹಲ ಅವರಲ್ಲಿ ಇರುವದು; ಆಗ ಒಬ್ಬೊಬ್ಬನು ತನ್ನ ತನ್ನ ನೆರೆಯವನ ಕೈಯನ್ನು ಹಿಡಿಯುವನು ಮತ್ತು ಅವನ ಕೈ ತನ್ನ ನೆರೆಯವನ ಮೇಲೆ ಎತ್ತಲ್ಪಡುವದು.
14
ಯೆಹೂದವು ಸಹ ಯೆರೂಸಲೇಮಿನಲ್ಲಿ ಯುದ್ಧ ಮಾಡುವದು; ಸುತ್ತಲಿರುವ ಎಲ್ಲಾ ಅನ್ಯ ಜನಾಂಗಗಳ ಸಂಪತ್ತಾಗಿ ರುವ, ಚಿನ್ನ, ಬೆಳ್ಳಿ, ವಸ್ತ್ರಗಳು ಬಹು ಹೇರಳವಾಗಿ ಕೂಡಿಸಲ್ಪಡುವವು.
15
ಆ ಗುಡಾರಗಳಲ್ಲಿರುವ ಕುದುರೆ, ಹೇಸರಕತ್ತೆ, ಒಂಟೆ, ಕತ್ತೆ ಮೊದಲಾದ ಎಲ್ಲಾ ಪಶುಗಳ ಬಾಧೆಯು ಈ ಬಾಧೆಯ ಹಾಗೆಯೇ ಇರುವದು.
16
ಆಗುವದೇನಂದರೆ--ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗ ಗಳಲ್ಲಿ ಉಳಿದವರೆಲ್ಲಾ ವರುಷ ವರುಷಕ್ಕೆ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೂ ಗುಡಾ ರಗಳ ಹಬ್ಬವನ್ನು ಆಚರಿಸುವದಕ್ಕೂ ಹೋಗುವರು.
17
ಆಗುವದೇನಂದರೆ, ಭೂಮಿಯ ಗೋತ್ರಗಳಲ್ಲಿ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೆ ಯೆರೂಸಲೇಮಿಗೆ ಹೋಗದೆ ಇರುವವರ್ಯಾರೋ ಅವರ ಮೇಲೆ ಮಳೆ ಇಲ್ಲದೆ ಇರುವದು.
18
ಮಳೆ ಇಲ್ಲದ ಐಗುಪ್ತದ ಗೋತ್ರದವರು ಹೋಗದಿದ್ದರೆ ಗುಡಾರಗಳ ಹಬ್ಬವನ್ನು ಆಚರಿಸುವದಕ್ಕೆ ಬಾರದ ಅನ್ಯಜನಾಂಗಗಳನ್ನು ಕರ್ತನು ಹೊಡೆಯುವ ವ್ಯಾಧಿಯು ಅವರ ಮೇಲೆ ಇರುವದು.
19
ಇದೇ ಐಗುಪ್ತದ ದಂಡನೆಯೂ ಗುಡಾರಗಳ ಹಬ್ಬ ವನ್ನು ಆಚರಿಸುವದಕ್ಕೆ ಬಾರದ ಎಲ್ಲಾ ಜನಾಂಗಗಳ ದಂಡನೆಯೂ ಆಗಿರುವದು.
20
ಆ ದಿನದಲ್ಲಿ ಕುದುರೆಗಳ ಗೆಜ್ಜೆಗಳ ಮೇಲೆ ಕರ್ತನಿಗೆ ಪರಿಶುದ್ಧವು ಎಂದಿರುವದು; ಕರ್ತನ ಆಲಯದ ಪಾತ್ರೆಗಳು ಬಲಿಪೀಠದ ಮುಂದಿನ ಪಾತ್ರೆಗಳ ಹಾಗಿರುವವು.
21
ಹೌದು, ಯೆರೂಸಲೇಮಿ ನಲ್ಲಿಯೂ ಯೆಹೂದದಲ್ಲಿಯೂ ಇರುವ ಪ್ರತಿ ಯೊಂದು ಪಾತ್ರೆಯು ಸೈನ್ಯಗಳ ಕರ್ತನಿಗೆ ಪರಿಶುದ್ಧ ವಾಗಿರುವವು; ಯಜ್ಞಗಳನ್ನು ಅರ್ಪಿಸುವವರೆಲ್ಲರು ಬಂದು ಅವುಗಳಲ್ಲಿ ತಕ್ಕೊಂಡು ಬೇಯಿಸುವರು; ಆ ದಿನದಲ್ಲಿ ಕಾನಾನ್ಯನು ಸೈನ್ಯಗಳ ಕರ್ತನ ಆಲಯದಲ್ಲಿ ಇನ್ನು ಮೇಲೆ ಇರುವದೇ ಇಲ್ಲ.
‹