ಮುಖಪುಟ
ನಮ್ಮನ್ನು ಸಂಪರ್ಕಿಸಿ
ಕನ್ನಡ
KJV
தமிழ்
తెలుగు
हिन्दी
ಪ್ರಕಟನೆ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
೧ ಸಮುವೇಲನು
೨ ಸಮುವೇಲನು
೧ ಅರಸುಗಳು
೨ ಅರಸುಗಳು
೧ ಪೂರ್ವಕಾಲವೃತ್ತಾಂತ
೨ ಪೂರ್ವಕಾಲವೃತ್ತಾಂತ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗಳು
ರೋಮಾಪುರದವರಿಗೆ
೧ ಕೊರಿಂಥದವರಿಗೆ
೨ ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
೧ ಥೆಸಲೊನೀಕದವರಿಗೆ
೨ ಥೆಸಲೊನೀಕದವರಿಗೆ
೧ ತಿಮೊಥೆಯನಿಗೆ
೨ ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
೧ ಪೇತ್ರನು
೨ ಪೇತ್ರನು
೧ ಯೋಹಾನನು
೨ ಯೋಹಾನನು
೩ ಯೋಹಾನನು
ಯೂದನು
ಪ್ರಕಟನೆ
4
1
2
3
4
5
6
7
8
9
10
11
12
13
14
15
16
17
18
19
20
21
22
1
ಇದಾದ ಮೇಲೆ ನಾನು ನೋಡಿದಾಗ ಇಗೋ, ಪರಲೋಕದಲ್ಲಿ ತೆರೆದಿದ್ದ ಬಾಗಿಲು ಕಾಣಿಸಿತು; ನನ್ನ ಸಂಗಡ ತುತೂರಿಯು ಮಾತನಾಡುತ್ತದೊ ಎಂಬಂತೆ ನಾನು ಮೊದಲು ಕೇಳಿದ್ದ ಧ್ವನಿಯು ನನಗೆ ಕೇಳಿಸಿತು; ಅದು--ಇಲ್ಲಿಗೆ ಮೇಲಕ್ಕೇರಿ ಬಾ, ಮುಂದೆ ಆಗತಕ್ಕವುಗಳನ್ನು ನಾನು ನಿನಗೆ ತೋರಿ ಸ
2
ಕೂಡಲೆ ನಾನು ಆತ್ಮವಶ ನಾದೆನು; ಆಗ ಇಗೋ, ಪರಲೋಕದಲ್ಲಿ ಒಂದು ಸಿಂಹಾಸನವಿತ್ತು; ಸಿಂಹಾಸನದ ಮೇಲೆ ಒಬ್ಬಾತನು ಕೂತಿದ್ದನು.
3
ಕೂತಿದ್ದಾತನು ಸೂರ್ಯಕಾಂತ ಪದ್ಮರಾಗ ಕಲ್ಲುಗಳಂತೆ ಕಾಣುತ್ತಿದ್ದನು; ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಮಳೆ ಬಿಲ್ಲು ಇತ್ತು.
4
ಇದಲ್ಲದೆ ಸಿಂಹಾಸನದ ಸುತ್ತಲೂ ಇಪ್ಪತ್ತನಾಲ್ಕು ಆಸನಗಳಿದ್ದವು; ಆ ಆಸನಗಳ ಮೇಲೆ ಬಿಳೀ ವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ತು ನಾಲ್ಕು ಮಂದಿ ಹಿರಿಯರು ಕೂತಿದ್ದರು; ಅವರ ತಲೆಗಳ ಮೇಲೆ ಚಿನ್ನದ ಕಿರೀಟ ಗಳಿದ್ದವು.
5
ಸಿಂಹಾಸನದೊಳಗಿಂದ ಮಿಂಚುಗಳೂ ಗುಡುಗುಗಳೂ ಶಬ್ದಗಳೂ ಹೊರಟವು; ಅದರ ಮುಂದೆ ದೇವರ ಏಳು ಆತ್ಮಗಳಾಗಿರುವ ಏಳು ಬೆಂಕಿಯ ದೀಪಗಳು ಉರಿಯುತ್ತಿದ್ದವು.
6
ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ ಗಾಜಿನ ಸಮುದ್ರವಿದ್ದ ಹಾಗೆ ಇತ್ತು. ಸಿಂಹಾಸನದ ಮಧ್ಯದಲ್ಲಿ ಮತ್ತು ಅದರ ಸುತ್ತಲೂ ನಾಲ್ಕು ಜೀವಿಗಳಿದ್ದವು; ಅವುಗಳಿಗೆ ಹಿಂದೆ ಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು.
7
ಮೊದಲನೆಯ ಜೀವಿಯು, ಸಿಂಹದಂತಿತ್ತು, ಎರಡ ನೆಯ ಜೀವಿಯು ಹೋರಿಯಂತಿತ್ತು; ಮೂರನೆಯ ಜೀವಿಯ ಮುಖವು ಮನುಷ್ಯರ ಮುಖದಂತಿತ್ತು; ನಾಲ್ಕನೆಯ ಜೀವಿಯು ಹಾರುವ ಗರುಡ ಪಕ್ಷಿಯಂತಿತ್ತು.
8
ಆ ನಾಲ್ಕು ಜೀವಿಗಳೊಳಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು; ಅವುಗಳಿಗೆ ತುಂಬಾ ಕಣ್ಣುಗಳಿದ್ದವು; ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ-- ಇದ್ದಾತನು ಇರುವಾತನೂ ಬರುವಾತನೂ ಸರ್ವಶಕ್ತ ನಾಗಿರುವ ದೇವರಾದ ಕರ್ತನು ಪರಿಶುದ್ಧನು ಪರಿ ಶುದ್ಧನು ಪರಿಶುದ್ಧನು ಎಂದು ಹೇ
9
ಯುಗ ಯುಗಾಂತರಗಳಲ್ಲಿಯೂ ಜೀವಿಸುವಾತನಾಗಿ ಸಿಂಹಾ ಸನದ ಮೇಲೆ ಕೂತಿರುವಾತನಿಗೆ ಆ ಜೀವಿಗಳು ಪ್ರಭಾವಮಾನ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದವು.
10
ಆಗ ಆ ಇಪ್ಪತ್ತನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕೂತಿದ್ದಾತನ ಮುಂದೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ ಯುಗಯುಗಾಂತರ ಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಾ--
11
ಓ ಕರ್ತನೇ, ನೀನು ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಯಾಕಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಅವು ನಿನ್ನ ಚಿತ್ತ ದಂತೆ ಉಂಟಾಗಿ ಸೃಷ್ಟಿಸಲ್ಪಟ್ಟವು ಎಂದು ಹೇಳುವರು.
‹
›