ಮುಖಪುಟ
ನಮ್ಮನ್ನು ಸಂಪರ್ಕಿಸಿ
ಕನ್ನಡ
KJV
தமிழ்
తెలుగు
हिन्दी
ಹಗ್ಗಾಯ
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
೧ ಸಮುವೇಲನು
೨ ಸಮುವೇಲನು
೧ ಅರಸುಗಳು
೨ ಅರಸುಗಳು
೧ ಪೂರ್ವಕಾಲವೃತ್ತಾಂತ
೨ ಪೂರ್ವಕಾಲವೃತ್ತಾಂತ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗಳು
ರೋಮಾಪುರದವರಿಗೆ
೧ ಕೊರಿಂಥದವರಿಗೆ
೨ ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
೧ ಥೆಸಲೊನೀಕದವರಿಗೆ
೨ ಥೆಸಲೊನೀಕದವರಿಗೆ
೧ ತಿಮೊಥೆಯನಿಗೆ
೨ ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
೧ ಪೇತ್ರನು
೨ ಪೇತ್ರನು
೧ ಯೋಹಾನನು
೨ ಯೋಹಾನನು
೩ ಯೋಹಾನನು
ಯೂದನು
ಪ್ರಕಟನೆ
2
1
2
1
ಏಳನೆಯ ತಿಂಗಳಿನಲ್ಲಿ, ತಿಂಗಳಿನ ಇಪ್ಪ ತ್ತೊಂದನೆಯ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮೂಲಕ ಉಂಟಾಯಿತು; ಏನಂದರೆ--
2
ಯೆಹೂದದ ಅಧಿಪತಿಯಾದ ಶೆಯಲ್ತೀ ಯೇಲನ ಮಗನಾದ ಜೆರುಬ್ಬಾಬೆಲನಿಗೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನಿಗೂ ಜನರಲ್ಲಿ ಉಳಿದವರಿಗೂ ನೀನು ಹೇಳತಕ್ಕದ್ದೇನಂದರೆ--
3
ಈ ಆಲಯವನ್ನು ಅದರ ಪೂರ್ವದ ಮಹಿಮೆಯಲ್ಲಿ ನೋಡಿದವರೊಳಗೆ ಉಳಿದ ವರು ನಿಮ್ಮಲ್ಲಿ ಯಾರು? ಈಗ ಅದನ್ನು ಹೇಗೆ ನೋಡು ತ್ತೀರಿ? ಇದು ನಿಮ್ಮ ಕಣ್ಣುಗಳಿಗೆ ಅದರ ಹೋಲಿಕೆಯು ಏನೂ ಇಲ್ಲದ ಹಾಗೆ ತೋರು ತ್ತದಲ್ಲವೋ?
4
ಆದಾಗ್ಯೂ ಈಗ ಕರ್ತನು ಹೇಳುತ್ತಾನೆ --ಜೆರುಬ್ಬಾಬೆಲನೇ, ಬಲವಾಗಿರು; ಪ್ರಧಾನ ಯಾಜಕ ನಾದ ಯೆಹೋಚಾದಾಕನ ಮಗನಾದ ಯೆಹೋ ಶುವನೇ, ಬಲವಾಗಿರು; ದೇಶದ ಜನರೆಲ್ಲರೇ, ಬಲ ವಾಗಿರ್ರಿ ಎಂದು ಕರ್ತನು ಹೇಳುತ್ತಾನೆ; ಕೆಲಸ ಮಾಡಿರಿ; ನಾನು ನಿಮ್ಮ ಸಂಗಡ ಇದ್ದೇನೆಂದು ಸೈನ್ಯ ಗಳ ಕರ್ತನು ಹೇಳುತ್ತಾನೆ.
5
ನೀವು ಐಗುಪ್ತದೊಳ ಗಿಂದ ಹೊರಗೆ ಬಂದಾಗ ನಾನು ನಿಮ್ಮ ಸಂಗಡ ಒಡಂಬಡಿಕೆ ಮಾಡಿದ ವಾಕ್ಯದ ಪ್ರಕಾರ ನನ್ನ ಆತ್ಮವು ನಿಮ್ಮ ಮಧ್ಯದಲ್ಲಿ ನಿಲ್ಲುತ್ತದೆ; ನೀವು ಭಯಪಡ ಬೇಡಿರಿ.
6
ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ, ಇನ್ನು ಒಂದು ಸಾರಿ ಕೊಂಚ ಕಾಲವಾದ ಮೇಲೆ ನಾನು ಆಕಾಶಗಳನ್ನೂ ಭೂಮಿಯನ್ನೂ ಸಮುದ್ರ ವನ್ನೂ ಒಣಗಿದ ನೆಲವನ್ನೂ ಕದಲಿಸುತ್ತೇನೆ.
7
ಎಲ್ಲಾ ಜನಾಂಗಗಳನ್ನು ಅದುರಿಸುತ್ತೇನೆ; ಎಲ್ಲಾ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ಮಹಿಮೆಯಿಂದ ತುಂಬಿಸುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
8
ಬೆಳ್ಳಿಯು ನನ್ನದು, ಚಿನ್ನವು ನನ್ನದು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
9
ಈ ಆಲಯದ ಮುಂದಿನ ಮಹಿಮೆಯು ಹಿಂದಿನ ಮಹಿಮೆಗಿಂತ ವಿಶೇಷವಾಗಿರುವದು ಎಂದು ಸೈನ್ಯಗಳ ಕರ್ತನು ಹೇಳು ತ್ತಾನೆ; ಈ ಸ್ಥಳದಲ್ಲಿ ಸಮಾಧಾನ ಕೊಡುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
10
ದಾರ್ಯಾವೆಷನ ಎರಡನೇ ವರುಷದಲ್ಲಿ ಒಂಭ ತ್ತನೇ ತಿಂಗಳಿನ, ಇಪ್ಪತ್ತನಾಲ್ಕನೆ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನಿಂದ ಉಂಟಾಗಿ ಹೇಳಿದ್ದೇನಂದರೆ,
11
ಸೈನ್ಯಗಳ ಕರ್ತನು ಹೇಳುವದೇ ನಂದರೆ--ನ್ಯಾಯಪ್ರಮಾಣದ ವಿಷಯವಾಗಿ ಯಾಜಕ ರಿಗೆ--
12
ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಪರಿಶುದ್ಧ ಮಾಂಸವನ್ನು ಹೊತ್ತು, ತನ್ನ ಸೆರಗಿನಿಂದ ರೊಟ್ಟಿಯ ನ್ನಾದರೂ ಬೇಯಿಸಿದ್ದನ್ನಾದರೂ ದ್ರಾಕ್ಷಾರಸವನ್ನಾ ದರೂ ಎಣ್ಣೆಯನ್ನಾದರೂ ಯಾವ ವಿಧದ ಆಹಾರವ ನ್ನಾದರೂ ಮುಟ್ಟಿದರೆ ಅದು ಪರಿಶುದ್ಧವಾಗುವದೋ ಕೇಳು ಅಂದನು. ಯಾಜಕರು--ಇಲ್ಲವೆಂದು ಉತ್ತರ ಕೊಟ್ಟರು.
13
ಆಗ ಹಗ್ಗಾಯನು--ಆದರೆ ಹೆಣದಿಂದ ಅಶುದ್ಧನಾದವನು, ಇವುಗಳಲ್ಲಿ ಯಾವದನ್ನಾದರೂ ಮುಟ್ಟಿದರೆ, ಅಶುದ್ಧವಾಗುವದೋ ಅಂದನು. ಯಾಜ ಕರು ಉತ್ತರ ಕೊಟ್ಟು--ಅಶುದ್ದವಾಗುವದು ಅಂದರು.
14
ಆಗ ಹಗ್ಗಾಯನು ಉತ್ತರಕೊಟ್ಟು ಹೇಳಿದ್ದೇನಂದರೆ --ಈ ಜನರೂ ಈ ಜನಾಂಗವೂ ನನ್ನ ಮುಂದೆ ಹೀಗೆಯೇ ಇದ್ದಾರೆ ಎಂದು ಕರ್ತನು ಅನ್ನುತ್ತಾನೆ; ಅವರ ಕೈಕೆಲಸಗಳೆಲ್ಲಾ ಹೀಗೆಯೇ; ಅವರು ಅರ್ಪಿಸು ವಂಥದ್ದು ಅಶುದ್ಧವೇ.
15
ಈಗ ಚೆನ್ನಾಗಿ ಯೋಚಿಸಿ ಕೊಳ್ಳಿರಿ; ಇಂದಿನಿಂದ ಇದಕ್ಕೆ ಮುಂಚೆ ಕರ್ತನ ಆಲಯದಲ್ಲಿ ಕಲ್ಲಿನ ಮೇಲೆ ಕಲ್ಲು ಇಡಲ್ಪಡುವದಕ್ಕಿಂತ ಕ್ಷಿುುಂಚೆ
16
ಆ ದಿವಸಗಳು ಇದ್ದದ್ದು ಮೊದಲುಗೊಂಡು ಒಬ್ಬನು ಇಪ್ಪತ್ತು ಸೇರಿನ ರಾಶಿಗೆ ಬಂದಾಗ ಹತ್ತು ಸೇರು ಮಾತ್ರವಾಗಿತ್ತು; ಒಬ್ಬನು ಐವತ್ತು ಪಾತ್ರೆಗಳನ್ನು ತುಂಬಿ ಸುವದಕ್ಕೆ ತೊಟ್ಟಿಗೆ ಬಂದಾಗ ಇಪ್ಪತ್ತು ಮಾತ್ರ ದೊರೆ ಯುತ್ತಿತ್ತಷ್ಟೆ.
17
ನಾನು ನಿಮ್ಮನ್ನು ಸಸ್ಯ ನಾಶದಿಂದಲೂ ಬಿರುಗಾಳಿಯಿಂದಲೂ ಕಲ್ಮಳೆಯಿಂದಲೂ ನಿಮ್ಮ ಕೈ ದುಡಿತಗಳನ್ನೆಲ್ಲಾ ಹೊಡೆದೆನು; ಅದರೂ ನೀವು ನನ್ನ ಕಡೆಗೆ ತಿರುಗಲಿಲ್ಲವೆಂದು ಕರ್ತನು ಅನ್ನುತ್ತಾನೆ.
18
ಚೆನ್ನಾಗಿ ಯೋಚಿಸಿಕೊಳ್ಳಿರಿ; ಇಂದಿನಿಂದ ಇದಕ್ಕೆ ಮುಂಚೆ ಒಂಭತ್ತನೇ ತಿಂಗಳಿನ ಇಪ್ಪತ್ತ ನಾಲ್ಕನೆಯ ದಿನದಲ್ಲಿ ಕರ್ತನ ಮಂದಿರದ ಅಸ್ತಿವಾರವು ಹಾಕಲ್ಪ ಟ್ಟಂದಿನಿಂದ ಯೋಚಿಸಿ ಕೊಳ್ಳಿರಿ.
19
ಬೀಜವು ಇನ್ನು ಕಣಜದಲ್ಲಿ ಉಂಟೋ? ಮತ್ತು ದ್ರಾಕ್ಷೆ, ಅಂಜೂರ, ದಾಳಿಂಬರ, ಎಣ್ಣೆ ಮರಗಳು ಇನ್ನು ಫಲಿಸಲಿಲ್ಲ ವಲ್ಲಾ. ಈ ದಿನವು ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.
20
ಎರಡನೇ ಸಾರಿ ಕರ್ತನ ವಾಕ್ಯವು ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಹಗ್ಗಾಯನಿಗೆ ಉಂಟಾ ಯಿತು.
21
ಹೇಗಂದರೆ, ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನಿಗೆ ನೀನು ಹೇಳತಕ್ಕದ್ದೇನಂದರೆ--ನಾನು ಆಕಾಶಗಳನ್ನೂ ಭೂಮಿಯನ್ನೂ ಕದಲಿಸುವೆನು.
22
ರಾಜ್ಯಗಳ ಸಿಂಹಾಸನವನ್ನು ಕೆಡವಿಹಾಕುವೆನು; ಅನ್ಯ ಜನಾಂಗಗಳ ರಾಜ್ಯಗಳ ಬಲವನ್ನು ನಾಶಮಾಡುವೆನು, ರಥಗಳನ್ನೂ ಅವುಗಳಲ್ಲಿ ಸವಾರಿ ಮಾಡುವವರನ್ನೂ ಕೆಡವಿಹಾಕುವೆನು; ಕುದುರೆಗಳೂ ಅದರ ಸವಾರರೂ ಪ್ರತಿಯೊಬ್ಬನೂ ತನ್ನ ಸಹೋದರನ ಕತ್ತಿಯಿಂದ ಬೀಳು ವನು.
23
ಸೈನ್ಯಗಳ ಕರ್ತನು ಅನ್ನುತ್ತಾನೆ--ಆ ದಿನದಲ್ಲಿ ಶೆಯಲ್ತೀಯೇಲನ ಮಗನಾದ ನನ್ನ ಸೇವಕನಾದ ಜೆರು ಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದು ಕೊಂಡು ಮುದ್ರೆಯ ಹಾಗೆ ಇಡುವೆನು; ನಿನ್ನನ್ನು ನಾನೇ ಆದುಕೊಂಡಿದ್ದೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
‹