ಮುಖಪುಟ
ನಮ್ಮನ್ನು ಸಂಪರ್ಕಿಸಿ
ಕನ್ನಡ
KJV
தமிழ்
తెలుగు
हिन्दी
ಯೆಹೆಜ್ಕೇಲನು
ಆದಿಕಾಂಡ
ವಿಮೋಚನಕಾಂಡ
ಯಾಜಕಕಾಂಡ
ಅರಣ್ಯಕಾಂಡ
ಧರ್ಮೋಪದೇಶಕಾಂಡ
ಯೆಹೋಶುವ
ನ್ಯಾಯಸ್ಥಾಪಕರು
ರೂತಳು
೧ ಸಮುವೇಲನು
೨ ಸಮುವೇಲನು
೧ ಅರಸುಗಳು
೨ ಅರಸುಗಳು
೧ ಪೂರ್ವಕಾಲವೃತ್ತಾಂತ
೨ ಪೂರ್ವಕಾಲವೃತ್ತಾಂತ
ಎಜ್ರನು
ನೆಹೆಮಿಯ
ಎಸ್ತೇರಳು
ಯೋಬನು
ಕೀರ್ತನೆಗಳು
ಙ್ಞಾನೋಕ್ತಿಗಳು
ಪ್ರಸಂಗಿ
ಪರಮ ಗೀತ
ಯೆಶಾಯ
ಯೆರೆಮಿಯ
ಪ್ರಲಾಪಗಳು
ಯೆಹೆಜ್ಕೇಲನು
ದಾನಿಯೇಲನು
ಹೋಶೇ
ಯೋವೇಲ
ಆಮೋಸ
ಓಬದ್ಯ
ಯೋನ
ಮಿಕ
ನಹೂಮ
ಹಬಕ್ಕೂಕ್ಕ
ಚೆಫನ್ಯ
ಹಗ್ಗಾಯ
ಜೆಕರ್ಯ
ಮಲಾಕಿಯ
ಮತ್ತಾಯನು
ಮಾರ್ಕನು
ಲೂಕನು
ಯೋಹಾನನು
ಅಪೊಸ್ತಲರ ಕೃತ್ಯಗಳು
ರೋಮಾಪುರದವರಿಗೆ
೧ ಕೊರಿಂಥದವರಿಗೆ
೨ ಕೊರಿಂಥದವರಿಗೆ
ಗಲಾತ್ಯದವರಿಗೆ
ಎಫೆಸದವರಿಗೆ
ಫಿಲಿಪ್ಪಿಯವರಿಗೆ
ಕೊಲೊಸ್ಸೆಯವರಿಗೆ
೧ ಥೆಸಲೊನೀಕದವರಿಗೆ
೨ ಥೆಸಲೊನೀಕದವರಿಗೆ
೧ ತಿಮೊಥೆಯನಿಗೆ
೨ ತಿಮೊಥೆಯನಿಗೆ
ತೀತನಿಗೆ
ಫಿಲೆಮೋನನಿಗೆ
ಇಬ್ರಿಯರಿಗೆ
ಯಾಕೋಬನು
೧ ಪೇತ್ರನು
೨ ಪೇತ್ರನು
೧ ಯೋಹಾನನು
೨ ಯೋಹಾನನು
೩ ಯೋಹಾನನು
ಯೂದನು
ಪ್ರಕಟನೆ
48
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
1
ಈಗ ಆ ಗೋತ್ರಗಳ ಹೆಸರುಗಳು ಯಾವವಂದರೆ: ಉತ್ತರದ ಕೊನೆಯಿಂದ ಹೆತ್ಲೋನಿನ ಮಾರ್ಗದ ಮೇರೆಗೂ ಹಮಾತಿಗೆ ಹೋಗುವ ಮಾರ್ಗವಾಗಿ ಹಚರ್ ಏನಾನಿನ ಉತ್ತರದ ಕಡೆಗಿರುವ ದಮಸ್ಕದ ಮೇರೆಯೂ ಹಮಾತಿನ ಬಳಿ ಯಲ್ಲಿ ಇರುವ ಪೂರ್ವ, ಪಶ್ಚಿಮ ಇವೇ ಅದರ ಮೇರೆಗಳು, ದಾನ್‌ನ ಒಂದು ಭಾಗವಾಗಿದೆ.
2
ದಾನಿನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿ ಮದ ವರೆಗೂ ಆಶೇರನಿಗೆ ಒಂದು ಭಾಗವಾಗಿದೆ.
3
ಆಶೇರನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ನಫ್ತಾಲಿಗೆ ಒಂದು ಭಾಗವಾಗಿದೆ.
4
ನಫ್ತಾಲಿಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೆ ಮನಸ್ಸೆಗೆ ಒಂದು ಭಾಗ.
5
ಮನಸ್ಸೆಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಎಫ್ರಾಯಾಮ್‌ಗೆ ಒಂದು ಭಾಗ.
6
ಎಫ್ರಾ ಯಾಮ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ವರೆಗೆ ರೂಬೇನ್‌ಗೆ ಒಂದು ಭಾಗ.
7
ರೂಬೇನನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ಯೆಹೂದಕ್ಕೆ ಒಂದು ಭಾಗ.
8
ಯೆಹೂದದ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಇಪ್ಪತ್ತೈದು ಸಾವಿರ ಮೊಳ ಅಗಲವಾದಂತ ಆ ಬೇರೆ ಪಾಲುಗಳಲ್ಲಿ ಒಂದರ ಹಾಗೆ ಉದ್ದವಾದಂತ ನೀವು ಅರ್ಪಿಸುವಂತ ಕಾಣಿಕೆ ಪೂರ್ವದಿಂದ ಪಶ್ಚಿಮದ ಕಡೆಯ ವರೆಗೂ ಇರಬೇಕು. ಅದರ ಮಧ್ಯದಲ್ಲಿ ಪರಿಶುದ್ಧ ಸ್ಥಳವೂ ಇರಬೇಕು.
9
ನೀವು ಕರ್ತನಿಗೆ ಅರ್ಪಿಸುವಂತ ಕಾಣಿಕೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಮೊಳ ಅಗಲವೂ ಆಗಿರಬೇಕು;
10
ಅವರಿಗಾಗಿ ಅಂದರೆ ಯಾಜಕರಿಗಾಗಿ ಪರಿಶುದ್ಧ ಕಾಣಿಕೆ ಇರಬೇಕು, ಅದು ಉತ್ತರಕ್ಕೆ ಇಪ್ಪತ್ತೈದು ಸಾವಿರ, ಪಶ್ಚಿಮಕ್ಕೆ ಹತ್ತು ಸಾವಿರ ಅಗಲವೂ ಪೂರ್ವಕ್ಕೆ ಹತ್ತು ಸಾವಿರ ಅಗಲವೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಉದ್ದವೂ ಇರಬೇಕು; ಅದರ ಮಧ್ಯದಲ್ಲಿ ಕರ್ತನ ಪರಿಶುದ್ಧ ಸ್ಥಳವೂ ಇರಬೇಕು.
11
ಇದು ನನ್ನ ಆಜ್ಞೆಯಂತೆ ನಡಕೊಂಡ ಇಸ್ರಾಯೇಲಿನ ಮಕ್ಕಳು ತಪ್ಪಿಹೋದಾಗ, ಲೇವಿಯರೂ ತಪ್ಪಿಹೋದ ಪ್ರಕಾರ ತಪ್ಪಿಹೋಗದೆ ಇದ್ದಂತ ಚಾದೋ ಕನ ಕುಮಾರರಲ್ಲಿ ಪರಿಶುದ್ಧ ಮಾಡಲ್ಪಟ್ಟ ಯಾಜಕರ ದಾಗಿರಬೇಕು;
12
ಅರ್ಪಿಸಲ್ಪಟ್ಟ ಈ ದೇಶದ ಕಾಣಿಕೆ ಲೇವಿಯರ ಮೇರೆಯ ಬಳಿಯಲ್ಲಿಯೇ ಅತಿ ಪರಿಶುದ್ಧ ವಾದದ್ದಾಗಿರಬೇಕು.
13
ಯಾಜಕರ ಮೇರೆಗೆ ಎದುರಾಗಿ ಲೇವಿಯರಿಗೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಅಗಲವೂ ಆಗಬೇಕು. ಎಲ್ಲಾ ಉದ್ದವೂ ಇಪ್ಪತ್ತೈದು ಸಾವಿರ ಮತ್ತು ಅಗಲವು ಹತ್ತು ಸಾವಿರ.
14
ಅವರು ಅದರಲ್ಲಿ ಏನನ್ನೂ ಮಾರಬಾರದು, ಬದಲಾ ಯಿಸಬಾರದು, ದೇಶದ ಪ್ರಥಮ ಫಲವನ್ನು ಯಾರಿ ಗೂ ಕೊಡಬಾರದು; ಅದು ಕರ್ತನಿಗೆ ಪರಿಶುದ್ಧವಾ ಗಿದೆ.
15
ಅಗಲದಲ್ಲಿ ಮಿಕ್ಕ ಐದು ಸಾವಿರವೂ ಇಪ್ಪತ್ತೈದು ಸಾವಿರಕ್ಕೆ ಎದುರಾಗಿಯೂ ಪಟ್ಟಣಕ್ಕೆ ಸಾಧಾರಣವಾದ ಸ್ಥಳವು ನಿವಾಸಗಳಿಗಾಗಿಯೂ ಉಪ ನಗರಗಳಾಗಿಯೂ ಸಾಧಾರಣವಾದ ಸ್ಥಳವಾಗಿರಬೇಕು; ಪಟ್ಟಣವು ಅದರ ಮಧ್ಯದಲ್ಲಿರಬೇಕು;
16
ಅದರ ಅಳತೆಗಳು ಹೀಗಿರ ಬೇಕು; ಉತ್ತರದ ಕಡೆಗೆ ನಾಲ್ಕು ಸಾವಿರದ ಐನೂರು ಮೊಳ ದಕ್ಷಿಣದ ಕಡೆಗೆ ನಾಲ್ಕು ಸಾವಿರದ ಐನೂರು ಮೊಳ ಪೂರ್ವದ ಕಡೆಗೆ ನಾಲ್ಕು ಸಾವಿರದ ಐನೂರು ಮೊಳ ಪಶ್ಚಿಮದ ಕಡೆಗೆ ನಾಲ್ಕು ಸಾವಿರದ ಐನೂರ ಮೊಳ;
17
ಪಟ್ಟಣದ ಪ್ರಾಂತ್ಯಗಳು ಹೀಗಿರಬೇಕು: ಉತ್ತರದಲ್ಲಿ ಇನ್ನೂರಾ ಐವತ್ತು ಮೊಳ; ದಕ್ಷಿಣದಲ್ಲಿ ಇನ್ನೂರಾ ಐವತ್ತು ಮೊಳ; ಪೂರ್ವದಲ್ಲಿ ಇನ್ನೂರಾ ಐವತ್ತು ಮೊಳ; ಪಶ್ಚಿಮದಲ್ಲಿ ಇನ್ನೂರಾ ಐವತ್ತು ಮೊಳ.
18
ಕಾಣಿಕೆಯಾದ ಪರಿಶುದ್ಧ ಭಾಗಕ್ಕೆ ಎದು ರಾಗಿರುವಂತದ್ದೂ ಉದ್ದದಲ್ಲಿ ಮಿಕ್ಕಾದದ್ದೂ ಪೂರ್ವಕ್ಕೆ ಹತ್ತು ಸಾವಿರ ಮೊಳವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳವಾಗಿಯೂ ಇರಬೇಕು. ಅದು ಕಾಣಿಕೆಯ ಪರಿಶುದ್ಧ ಭಾಗಕ್ಕೆ ಎದುರಾಗಿರಬೇಕು. ಅದರ ಆದಾ ಯವು ಪಟ್ಟಣದಲ್ಲಿ ಸೇವೆ ಮಾಡುವವರ ಆಹಾರಕ್ಕಾಗು ವಷ್ಟು ಇರಬೇಕು.
19
ಪಟ್ಟಣದಲ್ಲಿ ಸೇವೆ ಮಾಡುವವರು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ಅದರಲ್ಲಿಯೇ ಸೇವೆಮಾಡಬೇಕು.
20
ಕಾಣಿಕೆಯ ಎಲ್ಲಾ ಸ್ಥಳವು ಇಪ್ಪ ತ್ತೈದು ಸಾವಿರ ಮೊಳ ಉದ್ದವಾಗಿಯೂ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರಬೇಕು; ನೀವು ಪರಿಶುದ್ಧ ಕಾಣಿಕೆಯನ್ನು ಚಚ್ಚೌಕವಾಗಿ ಪಟ್ಟಣದ ಸ್ವಾಸ್ತ್ಯದ ಸಂಗಡ ಅರ್ಪಿಸಬೇಕು.
21
ಪರಿಶುದ್ಧ ಕಾಣಿಕೆಗೂ ಪಟ್ಟಣದ ಸ್ವಾಸ್ತ್ಯಕ್ಕೂ ಈ ಕಡೆಗೂ ಆ ಕಡೆಗೂ ಮಿಕ್ಕಾದದ್ದು ಕಾಣಿಕೆಯ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪೂರ್ವದ ಮೇರೆಯಲ್ಲಿರು ವಂಥದ್ದೂ ಪಶ್ಚಿಮದಲ್ಲಿ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪಶ್ಚಿಮದ ಮೇರೆಯಲ್ಲಿರುವಂತದ್ದೂ ಪ್ರಧಾನನಿಗಾದ ಪಾಲಿಗೆ ಎದುರಾಗಿಯೂ ಇರಬೇಕು. ಅದು ಪರಿಶುದ್ಧ ಕಾಣಿಕೆಯೇ; ಆಲಯದ ಪರಿಶುದ್ಧ ಸ್ಥಳವೂ ಅದರ ಮಧ್ಯದಲ್ಲಿ ಇರಬೇಕು.
22
ಇದಲ್ಲದೆ ಲೇವಿಯರ ಸ್ವಾಸ್ತ್ಯದಿಂದ ಮೊದಲುಗೊಂಡು ಮತ್ತು ಪಟ್ಟಣದ ಸ್ವಾಸ್ತ್ಯದಿಂದ ಪ್ರಧಾನನ ನಡುವೆ ಇರುವಂಥ ದ್ದು ಯೆಹೂದದ ಮೇರೆಗೂ ಬೆನ್ಯಾವಿಾನನ ಮೇರೆಗೂ ಮಧ್ಯದಲ್ಲಿರುವಂಥದ್ದೂ ಪ್ರಧಾನನಿಗೆ ಆಗಬೇಕು.
23
ಮಿಕ್ಕ ಗೋತ್ರಗಳ ವಿಷಯವೇನಂದರೆ, ಪೂರ್ವ ದ ಕಡೆಯಿಂದ ಪಶ್ಚಿಮದ ವರೆಗೂ ಬೆನ್ಯಾವಿಾನನ
24
ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ವರೆಗೂ ಸಿಮೆಯೋನ್‌ನ ಒಂದು ಭಾಗ ವಾಗಿದೆ.
25
ಸಿಮೆಯೋನ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಇಸ್ಸಾಕಾರನ ಒಂದು ಭಾಗವಾಗಿದೆ;
26
ಇಸ್ಸಾಕಾರ ಮೇರೆಯ ಬಳಿ ಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಜೆಬುಲೋನನ ಒಂದು ಭಾಗವದೆ;
27
ಜೆಬು ಲೋನ್‌ನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ಗಾದನ ಒಂದು ಭಾಗವಾಗಿದೆ.
28
ಗಾದನ ಮೇರೆಯ ಬಳಿಯಲ್ಲಿ ದಕ್ಷಿಣದ ಕಡೆಯಲ್ಲಿ ದಕ್ಷಿಣದ ಮೇರೆಯು ತಾಮಾರ್ ಮೊದಲುಗೊಂಡು ಕಾದೇಶಿನ ವಾಗ್ವಾದದ ನೀರುಗಳ ವರೆಗೂ ಮಹಾ ಸಮುದ್ರಕ್ಕೆ ಹೋಗುವ ನದಿಯ ವರೆಗೂ ಇರಬೇಕು.
29
ನೀವು ಇಸ್ರಾಯೇಲಿನ ಗೋತ್ರ ಗಳಿಗೆ ಚೀಟು ಹಾಕಿ ಬಾಧ್ಯವಾಗಿ ಹಂಚಿಕೊಡಬೇಕಾದ ದೇಶವು ಇದೇ; ಅದರ ಭಾಗಗಳು ಇವೆ. ಎಂದು ದೇವರಾದ ಕರ್ತನು ಹೇಳುತ್ತಾನೆ.
30
ಪಟ್ಟಣದ ಹೊರಗೆ ಹೋಗುವಿಕೆಯು ಹೀಗಿರ ಬೇಕು--ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಅಳತೆಗಳು.
31
ಪಟ್ಟಣದ ಬಾಗಲುಗಳು ಇಸ್ರಾಯೇಲಿನ ಗೋತ್ರಗಳ ಹೆಸರುಗಳ ಪ್ರಕಾರ ಇರಬೇಕು; ಉತ್ತರಕ್ಕೆ ಮೂರು ಬಾಗಲುಗಳು; ರೂಬೇ ನನ ಬಾಗಲು ಒಂದು, ಯೆಹೂದನ ಬಾಗಲು ಒಂದು; ಲೇವಿಯ ಬಾಗಲು ಒಂದು.
32
ಪೂರ್ವದ ಗಡಿಯಲ್ಲಿ ನಾಲ್ಕು ಸಾವಿರದ ಐನೂರು, ಮತ್ತು ಮೂರು ಬಾಗ ಲುಗಳು; ಯೋಸೇಫನ ಬಾಗಲು ಒಂದು, ಬೆನ್ಯಾ ವಿಾನನ ಬಾಗಲು ಒಂದು; ದಾನನ ಬಾಗಲು ಒಂದು
33
ದಕ್ಷಿಣದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಅಳತೆಗಳು; ಮೂರು ಬಾಗಲುಗಳು; ಸಿಮೆಯೋನನ ಬಾಗಲು ಒಂದು, ಇಸ್ಸಾಕಾರನ ಬಾಗಲು ಒಂದು; ಜೆಬುಲೋನನ ಬಾಗಲು ಒಂದು.
34
ಪಶ್ಚಿಮದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು, ಅದರ ಬಾಗಲುಗಳು ಮೂರು; ಗಾದ ಬಾಗಲು ಒಂದು, ಆಶೇರ ಬಾಗಲು ಒಂದು, ನಫ್ತಾಲಿ ಬಾಗಲು ಒಂದು.
35
ಸುತ್ತಲೂ ಹದಿನೆಂಟು ಸಾವಿರ ಅಳತೆಗಳು; ಆ ದಿನದಿಂದ ಆ ಪಟ್ಟಣದ ಹೆಸರು ಕರ್ತನು ನೆಲೆ ಯಾಗಿರುವನು ಎಂಬದೇ ಆಗಿರುವದು.
‹